ಕ್ರಿಸ್ಮಸ್ ಹಬ್ಬದ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ಅಜಿಶಾ ಅಜಿತ್ ಉಪಸ್ಥಿತರಿದ್ದರು. ೫ ನೇ ತರಗತಿಯ ಜೊರ್ಡಾನ್ ಮತ್ತು ನುಬೈದ್ ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದನು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮv ಜೊಸಿಟ ನೊರೊನ್ನಾ ಉಪಮುಖ್ಯೋಪಾಧ್ಯಾಯರಾದ ಶ್ರೀ ಲೀಯಾ ಡಿಸೋಜ , ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂತೋಷ , ಶಾಂತಿ , ಭರವಸೆ ,ದಯೆ ಹಂಚಿಕೆ ಮತ್ತು ಪ್ರೀತಿಯಂತಹ ನೃತ್ಯ ರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡಿದರು. ಮುಖ್ಯ ಅತಿಥಿ ಸ್ಥಾನದಿಂದ ಮಾತಾನಾಡಿದ ಅಜಿಶಾ ಅಜಿತ್ ರವರು ನಿಮ್ಮ ನೆರೆಯವನ್ನು ನಿಮ್ಮಂತೆಯೇ ಪ್ರೀತಿಸಿ ಕೃತಜ್ಞರಾಗಿರಿ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ೫ ನೇ ತರಗತಿಯ ರಿಶಬ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದನು . ೫ ನೇತರಗತಿಯ ಸ್ಯಾಮ್, ಆಲಿಯಾ ,ಗ್ರೇಸ್ ಅಜಿತ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.