ಶಾಲಾ ವಾರ್ಷಿಕೋತ್ಸವದ ಸಂಭ್ರಮ
ಸAತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಡಿಸೆಂಬರ್ ೨೦ ರಂದು ಶಾಲಾ ಆವರಣದಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಳೆವಿದ್ಯಾರ್ಥಿಯಾಗಿರುವ ಇನ್ಪೊಸಿಸ್ ಎಚ್ .ಆರ್ ಮುಖ್ಯಸ್ಥರಾದ ಸುಶಾಂತ್ ತಾರಪ್ಪನ್ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ| ಮೆಲ್ವಿನ್ ಪಿಂಟೊ ಎಸ್ .ಜೆ ವಹಿಸಿದ್ದರು. ಶಾಲಾ ಸಂಚಾಲಕರಾದ ವಂ| ಜೊನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ,ಶಿಕ್ಷಕ ರಕ್ಷಕ ಸಂಘದ ಉಪಧ್ಯಕ್ಷರಾದ ಶ್ರೀ ವಿಕ್ಟರ್ ಸೆರಾವೊ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕ್ರಿಸ್ಟೊಫರ್ ಡಿಸೋಜ ಶಾಲಾ ನಾಯಕ ಎಮ್ ಭವಿಶ್ ಉಪನಾಯಕ ರಿಶೋನ್ ಡೆಸಾ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸುಶಾಂತ್ ತಾರಪ್ಪನ್ ಮಾತನಾಡಿ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಅಚ್ಚು ಮೆಚ್ಚಿನ ನೆನಪುಗಳನ್ನು ಮುಲುಕು ಹಾಕಿದರು. ಅವು ನನ್ನ ಜೀವನದ ಪ್ರಮುಖ ಕ್ಷಣಗಳು ಎಂದು ಬಣ್ಣಿಸಿದರು.
ಕ್ರಿಕೆಟಿಗ ವಿರಾಟ್ ಕೊಹ್ಲಿ ಯಂತೆ ಕಠಿಣ ಶ್ರಮವನ್ನು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಹಾಗೂ ಇತರಿಗೆ ಸಹಾಯ ಮಾಡಬೇಕು ಎಂಬುದಾಗಿ ಹೇಳಿದರು. ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ರೆಕ್ಟರ್ ಫಾ| ಮೆಲ್ವಿನ್ ಪಿಂಟೊ ಎಸ್ .ಜೆ ಮಕ್ಕಳು ಮಾನವೀಯತೆ , ಪ್ರೀತಿ ಮತ್ತು ಸಾಮರಸ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕಲಿಕೆ ಮತ್ತು ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಪತ್ರ ಮತ್ತು ಪದಕಗಳನ್ನು ನೀಡಲಾಯಿತು. ಮುಖ್ಯೋಪಾಧ್ಯಾಯಿನಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಪುಟಾಣಿ ಮಕ್ಕಳು ತಮ್ಮ ನೃತ್ಯದ ಮೂಲಕ ಪ್ರಕೃತಿಯ ಬಗ್ಗೆ ಕಾಳಜಿ , ಅಜ್ಜ ಅಜ್ಜಿಯರನ್ನು ಗೌರವಿಸುವ ಮೌಲ್ಯಗಳನ್ನು ಎತ್ತಿ ತೋರಿಸುವ ತಮ್ಮ ವಿಷಯಾಧರಿತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಉಪಯೋಗಿಸುವ ವಿಷಯಾಧರಿತ ನೃತ್ಯಗಳು ಪ್ರೇಕ್ಷಕರನ್ನು ಮೂಕರನ್ನಾಗಿಸಿತು. ಕಾರ್ಯಕ್ರಮವನ್ನು ೭ ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಾರಾ ಯಶಲ್, ಸ್ವಿಡಲ್ ಡೆಸಾ , ಆರಾಧನಾ ನಾಯಕ್ , ಲೈನಲ್ ಶಾನ್ , ಸಂಜನಾ , ಡೆನ್ಸಿಯಾ , ಅಕ್ಷಜ್ ಸ್ಟಾಲ್ಸನ್ ಅತ್ಯಂತ ಕೌಶಲದಿಂದ ನಿರ್ವಹಿಸಿದರು. ಉಪಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜ ರವರು ಧನ್ಯವಾದ ಸಮರ್ಪಿಸಿದರು ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.