ಸಂತ ಅಲೋಸಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಯಲ್ಲಿ 39 ವರ್ಷ ಗಳಿಂದ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀಮತಿ ಐರಿನ್ ಪಾಯಿಸ್ ಮತ್ತು ಶ್ರೀಯುತ ಬಿ ಪದ್ಮನಾಭ ರಾವ್ ಇವರಿಗೆ ಶಾಲಾ ಸಭಾಂಗಣದಲ್ಲಿ ಶುಭಾವಿದಾಯ ಸನ್ಮಾನ ಸಮಾರಂಭ ಜರಗಿತು.ಅಧ್ಯಕ್ಷ ಸ್ಥಾನ ದಿಂದ ಮಾತನಾಡಿದ ಶಾಲಾ ಸಂಚಾಲಕರಾದ ಫಾ ಜೋನ್ಸನ್ ಪಿಂಟೋ ಎಸ್ ಜೆ ರವರು “ಶಿಕ್ಷಕರು ತಮ್ಮ ಜೀವನದ 39 ವರ್ಷ ಗಳನ್ನು ನಮ್ಮ ಶಾಲೆಯ ವಿದ್ಯಾರ್ಥಿ ಗಳ ಉನ್ನತಿಗೆ ಮೂಡುಪಾಗಿರಿಸಿದರೆ, ಅವರ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದು ಹಾರೈಸಿದರು.ಶ್ರೀಮತಿ ಐರಿನ್ ಪಾಯೆಸ್ ಮತ್ತು ಶ್ರೀಯುತ ಬಿ ಪದ್ಮನಾಭ ರಾವ್ ರವರು ಮಕ್ಕಳನ್ನು ಉದ್ದೇಶಿಸಿ ” ನೀವು ಕಲಿತ ಶಾಲೆ,ಶಿಕ್ಷಕರು ಹಾಗೂ ಮೌಲ್ಯಗಳನ್ನು ಎಂದಿಗೂ ನೆನಪಿಡಿ,ನಮ್ಮ ಹಿರಿಯರು, ತಂದೆ ತಾಯಿ ಪ್ರೀತಿಯಿಂದ ನೋಡಿಕೊಳ್ಳಿ, ಕಲಿತು ದೊಡ್ಡವರಾಗಿ ನಿಮ್ಮಿಂದಗುವ ಸಹಾಯವನು ಈ ವಿದ್ಯಾಸಂಸ್ಥೆಗೆ ನೀಡಿ ಎಂದು ಕಿವಿ ಮಾತು ಹೇಳಿದರು.ತುಂಬಿದ ಸಭೆ ಯಲ್ಲಿ ನಿವೃತ್ತಿ ಹೊಂದುವ ಶಿಕ್ಷರಿಗೆ ಗೌರವಾನ್ವಿತವಾಗಿ ಸನ್ಮಾನ ಸಮಾರಂಭಾ ನೆರವೇರಿಸಲಾಯಿತು.ಶಿಕ್ಷಕರದ ಶ್ರೀಮತಿ ದೀಪ್ಶಿಕ ಮತ್ತು ವೊಯ್ಲೆಟ್ ಲೋಬೊ ಶುಭ ವಿದಾಯ ಸನ್ಮಾನ ಪ್ರಮಾಣ ಪತ್ರವನ್ನು ಮಂಡಿಸಿದರು. ಸಿಯಾನಾ ಡಿಸೋಜಾ ನೆರೆದ ಎಲ್ಲರನ್ನು ಸ್ವಾಗತಿಸಿದರು. ಸ್ನೇಹ ಮತ್ತು ಜೊಯೆನ್ ಸ್ಯಾಮ್ ಶಿಕ್ಷಕರ ಭಗ್ಗೆ ತಮ್ಮ ಪ್ರೀತಿ ಯನ್ನು ವ್ಯಕ್ತ ಪಡಿಸಿದರು. ನಿಖಿಲ್, ಫಾರ್ಸಿನ, ಲಕ್ಮಿನಾರಾಯಣ್ ಎಮ್ ಜೆ, ಸಿಯಾನ್ ಲೊಫೇಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಮುಕ್ಯೋಪಾಧ್ಯಾಯನೀ ಶ್ರೀಮತಿ ಜೋಸಿಟ್ಟಾ ನೋರೋನ್ಹ, ಉಪ ಮುಕ್ಯೋಪಾಧ್ಯಾಯ ಶ್ರೀ ಲಿಯಾ ಡಿಸೋಜ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಮೊಹಮ್ಮದ್ ಇಕ್ಬಲ್ ರವರು ಉಪಸ್ಥಿತರಿದ್ದರು.ಪರ್ಲ್ ಸಿಯೋನ ಮತ್ತು ಆಷಾಲ್ ರವರು ಈ ಕಾರ್ಯಕ್ರಮ ದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮಾರ್ಪಿಸಿದರು.































