೭೬ ನೇ ಗಣರಾಜ್ಯೋತ್ಸವದ ಸಂಭ್ರಮ
ದಿನಾಂಕ ೨೬-೧-೨೫ ನೇ ತಾರೀಖು ಆದಿತ್ಯವಾರ ಬೆಳಿಗ್ಗೆ ೮.೩೦ ಗಂಟೆಗೆ ೭೬ ನೇ ಗಣರಾಜ್ಯೋತ್ಸವದ ಆಚರಣೆ ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಿತು. ಪ್ರಾರ್ಥನಾಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.
ಮುಖ್ಯ ಅತಿಥಿಯಾಗಿ ಬಾರ್ ಕೌನ್ಸಿಲ್ ಅಸೋಸಿಯೇಶನ್ ಇದರ ಸದಸ್ಯೆ ಮತ್ತು ಇಸ್ಲಾಮಿಕ್ ಶಾಲೆಯಲ್ಲಿ ಶಿಕ್ಷಕಿಯಾದ ಶ್ರೀಮತಿ ಸಮೀನಾ ಅವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಪುಷ್ಪಗುಚ್ಛ ನೀಡಿ ಮುಖ್ಯ ಅತಿಥಿಯನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯವರು ಧ್ವಜಾರೋಹಣವನ್ನು ಮಾಡಿದರು
ವೇದಿಕೆಯಲ್ಲಿ ಉಪಮುಖ್ಯೋಪಾಧ್ಯಾಯರಾದ ಶ್ರೀ ಲೀಯಾ ಡಿಸೋಜ ಮತ್ತು ಉಪನಾಯಕ ರಿಶೋನ್ ಡೇಸಾ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಸಮೀನಾರವರು ನ್ಯಾಯ , ಸಮಾನತೆ ಮತ್ತು ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಎತ್ತಿ ಹಿಡಿಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ೭ ನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ವಿವಿಧ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ೭ ನೇತರಗತಿಯ ವಿದ್ಯಾರ್ಥಿಗಳಾದ ಲೈನಲ್ ಶಾನ್ , ವ್ಯಾಲೆನ್, ಮತ್ತು ಮನೋಜ್ ನಿರ್ವಹಿಸಿದರು. ಧನ್ಯವಾದ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.