The Grandparents Day was observed very meaningfully at St. Aloysius College Higher Primary School on 10.02.2024. At 9.30 am, the Grandparents of the students were accorded a warm welcome at the School Gate and were further escorted to the School Hall by the School Band. The Programme kick started with the students seeking the blessings of the Grandparents present. Sri Harish Shetty and Smt Arathi Shetty, Grandparents of Saadhya Rai, student of UKG were the Chief Guests of the day, along with Smt. Josita Noronha, Headmistress, Sri Victor Serrao, Vice President of PTA, lighted the lamp and inaugurated the celebrations. Prayer, followed by dance, songs, all conducted by the little students brought a happy smile on the face of the Grandparents. Sri Liya D Souza, Asst Headmaster spoke on the importance of celebrating the day. Smt. Kalyanamma,
Grandmother of a student of first standard spoke on her experience as a grandmother. Smt Rosaline, another grandmother expressed her joy and shared her views on the role played by grandparents in the life of the little ones. Smt Arathi Shetty, Chief Guest of the function, also spoke on the occasion, sharing tips to handle grandchildren to make their childhood memorable. Thereafter, Collage with the topic of Grandparents; done by the students were left open for viewing and the best among them was awarded a prize. Smt Josita Noronha, Headmistress, gave her message, wishing both grandparents and grandchildren, happy times. The Programme ended with a vote of thanks.
ಅಜ್ಜ ಅಜ್ಜಿಯರ ದಿನದ ಆಚರಣೆ
ಅಜ್ಜ ಅಜ್ಜಿಯರ ದಿನವನ್ನು ಬಹಳ ಅರ್ಥಪೂರ್ಣವಾಗಿ ಸಡಗರದೊಂದಿಗೆ ಆಚರಿಸಲಾಯಿತು. ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ತಾರೀಕು ೧೦- ೨- ೨೦೨೪ ರಂದು ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಅಜ್ಜ ಅಜ್ಜಿಯರನ್ನು ವಾದ್ಯ ಗೋಷ್ಠಿಯ ಗೌರವಗಳೊಂದಿಗೆ ಮುಖ್ಯ ಸಭಾಂಗಣಕ್ಕೆ ಕರೆತರಲಾಯಿತು. ಹಿರಿಯವರ ಆಶೀರ್ವಾದಗಳನ್ನು ಮೊಮ್ಮಕ್ಕಳು ಪಡೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ,ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀಯುತ ವಿಕ್ಟರ್ ಸೆರಾವೊ ಮುಖ್ಯ ಅತಿಥಿಯವರಾದ ಶ್ರೀಮತಿ ಆರತಿ ಶೆಟ್ಟಿ ಮತ್ತು ಅವರ ಪತಿ ಹರೀಶ್ ಶೆಟ್ಟಿ ಯವರು ದೀಪ ಬೆಳಗಿಸುವುದರ ಜೊತೆಗೆ ವೇದಿಕೆಯ ಕಾರ್ಯಕ್ರಮಕ್ಕೆ ಆರಂಭ ನೀಡಿದರು. ಪುಟಾಣಿ ಮಕ್ಕಳಿಂದ ಕಾರ್ಯಕ್ರಮ ನಿರ್ವಹಣೆ , ಪ್ರಾರ್ಥನೆ , ಹಾಡು , ನೃತ್ಯಗಳು ನೆರವೇರಿದವು. ನಮ್ಮ ಶಿಕ್ಷಕರಾದ ಲೀಯಾ ಡಿಸೋಜರವರು ಅಜ್ಜ – ಅಜ್ಜಿ ಯರ ದಿನದ ಮಹತ್ವದ ಬಗ್ಗೆ ಹೇಳಿದರು. ೧ ನೇ ತರಗತಿಯ ವಿದ್ಯಾರ್ಥಿಯ ಅಜ್ಜಿಯಾದ ಶ್ರೀಮತಿ ಕಲ್ಯಾಣಮ್ಮ ತಮ್ಮ ಸವಿನೆನಪು ಹಾಗೂ ಹಾಡು ಹಾಡಿದರು. ಇನ್ನೊಬ್ಬರು ಶ್ರೀಮತಿ ರೊಸಲಿನ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯು ಕೆ ಜಿ ತರಗತಿಯ ಸಾಧ್ಯ ರೈ ಇವರ ಅಜ್ಜಿಯಾದ ಶ್ರೀಮತಿ ಆರತಿ ಶೆಟ್ಟಿ ಯವರು ತಮ್ಮ ಹೃದಯಂತರಾಳದ ಮಾತುಗಳನ್ನು ಆಡಿದರು. ವಿದ್ಯಾರ್ಥಿಗಳು ತಯಾರಿಸಿದ ಅಜ್ಜ ಅಜ್ಜಿಯ ಪೋಟೋಗಳ ಕೊಲಾಜ್‌ನ್ನು ಪ್ರದರ್ಶಿಸಲಾಗಿತ್ತು ಅದರಲ್ಲಿ ಉತ್ತಮ ರಚನೆಗೆ ಬಹುಮಾನ ನೀಡಿ ಗೌರವಿಸಲಾಯಿತು.ಅಜ್ಜ ಅಜ್ಜಿಯವರಿಗೆ ಮನೋರಂಜನ ಸ್ಪರ್ಧೆಯ ಆಟಗಳನ್ನು ಆಡಿಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸ್ವಿಟಾ ನೊರೊನ್ನಾ ರವರು ಅಜ್ಜ ಅಜ್ಜಿ ಯವರಿಗೆ ಮತ್ತು ಮೊಮ್ಮಕ್ಕಳಿಗೆ ಸಂದೇಶ ನೀಡಿದರು. ಧನ್ಯವಾದ ಸಮರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.