hmaloysiusprimary@gmail.com +91-824-2449728

Farewell Occasion – ಬೀಳ್ಗೊಡುಗೆ ಸಮಾರಂಭ

ಸಂತ ಎಲೋಶಿಯಸ್ ಕಾಲೇಜು ಹಿರಿಯ ಪ್ತ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ 24- 6- 23 ರಂದು ಇಲ್ಲಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಲೂವಿಸ್ ರವರಿಗೆ ಬೀಳ್ಗೊಡುಗೆ ಸಮಾರಂಭ ನೆರವೇರಿತು.
ಬೆಳಿಗ್ಗೆ 10.30 ಕ್ಕೆ ಶ್ರೀಮತಿ ಫಿಲೊಮಿನಾ ಲೂವಿಸ್‍ರವರನ್ನು ಶಾಲಾ ಸಂಚಾಲಕರು , ಮುಖ್ಯೋಪಾಧ್ಯಾಯಿನಿ , ಉಪಮುಖ್ಯೋಪಾಧ್ಯಾಯರು ವಾದ್ಯ ಘೋಷದ ಗೌರವದೊಂದಿಗೆ ಸಭಾಂಗಣಕ್ಕೆ ಕರೆತಂದರು.
ಕುಮಾರಿ ಅಶ್ವಿನಿ ಹಾಗೂ ಕುಮಾರಿ ಇನಿತ ರವರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳು ಮೊದಲಿಗೆ ಭಕ್ತಿಯಿಂದ ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ವಿದ್ಯಾರ್ಥಿನಿ ಆಶೆಲ್ ಸ್ವಾಗತ ಮಾಡಿದಳು . 7 ನೇ ತರಗತಿಯ ವಿದ್ಯಾರ್ಥಿ ಪ್ರಿನ್ಸಟನ್ ನಿರ್ಗಮ ಶಿಕ್ಷಕಿಯ ಬಗ್ಗೆ ಮನದಾಳದ ಮಾತುಗಳನ್ನು ಆಡಿದನು.
ವಿದ್ಯಾರ್ಥಿ ಸಮೂಹದಿಂದ ವಿದಾಯ ಗೀತೆ ನೆರವೇರಿತು. ಬೀಳ್ಗೊಡುಗೆ ಸಮಾರಂಭದ ಕೇಂದ್ರ ವ್ಯಕ್ತಿ ಶ್ರೀಮತಿ ಫಿಲೋಮಿನಾ ಲೂವಿಸ್ ರವರ ಸನ್ಮಾನ ಪತ್ರ
ವನ್ನು ಶ್ರೀಮತಿ ಐರಿನ್ ಪೈಸ್ ರವರು ಮಧುರವಾಗಿ ಓದಿ. ಅವರಿಗೆ ನೀಡಿ ಗೌರವಿಸಿದರು. ರೆ| ಫಾ| ಜೋನ್ ಡಿಸೋಜ ರವರು ಶಾಲು ಹೊದಿಸಿ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ನಾ ರವರು ಫಲಪುಷ್ಪ ನೀಡಿ ಸನ್ಮಾನಿಸಿದರು. ಶ್ರೀಯುತ ಲೀಯಾ ಡಿಸೋಜ ಹಾರ ಹಾಕಿ ಸನ್ಮಾನಿಸಿದರು.
ನಿವೃತ್ತ ಶಿಕ್ಷಕಿ ಶ್ರೀಮತಿ ಫಿಲೋಮಿನಾ ರವರು ತಮ್ಮ 37 ವರ್ಷದ ಅನುಭವದ ಬುತ್ತಿ ಬಿಚ್ಚಿ ಮನದಾಳದ ಮಾತನಾಡಿದರು. ವಿದ್ಯಾರ್ಥಿಗಳು ಪ್ರೀತಿಯ ಪುಷ್ಪಗಳನ್ನು ನೀಡಿ ಗೌರವಿಸಿದರು. ಶಾಲಾ ಸಂಚಾಲಕರಾದ ರೆ| ಫಾ| ಜಾನ್ ಡಿಸೋಜ ರವರು ಮಕ್ಕಳಿಗೆ ಶುಭ ನುಡಿಗಳನ್ನು ಆಡಿದರು.
ವಿದ್ಯಾರ್ಥಿಗಳಿಂದ ಸುಂದರ ನೃತ್ಯ ಕಾರ್ಯಕ್ರಮ ನೆರವೇರಿತು. ಶಾಲಾ ವಿದ್ಯಾರ್ಥಿ ನುರಾಜ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದನು . ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Powered By PERWEB SOLUTIONS