hmaloysiusprimary@gmail.com +91-824-2449728

Investiture Of School Cabinet – 2023

Investiture of school cabinet held in St. Aloysius College higher primary school
Election of school leaders of St. Aloysius College higher primary school Kodialbail for the academic year 2023-24
Election for the posts of school pupil leader was held at St. Aloysius college higher primary school on with great enthusiasm. Students numbering six stood for the elections.
Election through secret ballot was conducted very peacefully in a disciplined manner. The students too participated actively to select leaders for their school. Sri Arun was the chief Election Officer. Sri Harish Officiated as the election officer and Mrs. Irene Pais assisted in the seamless conduct of the elections. Out of the six Candidates who stood for the elections . Ayush was elected as the SPL, Joylan Dcosta as the ASPL and Sanvi Lobo as the secretary. All the elected candidates were felicitated by the school dignitaries, wishing them good luck specially in the coming academic year.
The investiture ceremony of the school cabinet of St. Aloysius college higher primary school Kodialbail, Mangalore was held on 17th June2023 at 10 a.m.

ಶಾಲಾ ಸಂಸತ್ತು
ಸAತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಶಾಲಾ ಸಂಸತ್ತು ಕಾರ್ಯಕ್ರಮ ನೆರವೇರಿತು. ತಾರೀಕು ೮-೬-೨೩ ಗುರುವಾರದಂದು ಅಭ್ಯರ್ಥಿ ವಿಧ್ಯಾರ್ಥಿಗಳಿಂದ ನಾಮ ಪತ್ರ ಸಲ್ಲಿಕೆ ಮಾಡಿಸಲಾಯಿತು. ತರಗತಿ ಅಧ್ಯಾಪಕರು ಹಾಗೂ ದೈಹಿಕ ಶಿಕ್ಷಕರ ಅನುಮೋದನೆಯೊಂದಿಗೆ ಮುಖ್ಯ ಶಿಕ್ಷಕಿಯವರು ಒಪ್ಪಿಗೆ ನೀಡಿದರು. ತಾರೀಕು ೯- ೬- ೨೩ ಹಾಗೂ ೧೦-೬-೨೩ ರಂದು ಚುನಾವಣಾ ಪ್ರಚಾರವನ್ನು ಶಾಲಾ ಆವರಣದೊಳಗೆ ನಡೆಸಲಾಯಿತು. ತಾರೀಕು ೧೨- ೬- ೨೩ ರಂದು ಚುನಾವಣಾ ಅಭ್ಯರ್ಥಿಗಳಿಂದ ಅಂತಿಮ ಭಾಷಣದ ಮೂಲಕ ಪ್ರಾಚಾರ ಕಾರ್ಯಕ್ಕೆ ತೆರೆ ಎಳೆಯಲಾಯಿತು. ತಾರೀಕು ೧೩-೬-೨೩ ರಂದು ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಗಿ ೧೨.೩೦ ಕ್ಕೆ ಮುಕ್ತಾಯ ಗೊಂಡಿತು. ತರಗತಿವಾರು ವಿಧ್ಯಾರ್ಥಿಗಳು ಸಾಲಾಗಿ ಬಂದು ತಮಗಿಷ್ಟವಾದ ಅಭ್ಯರ್ಥಿಗಳ ಆಯ್ಕೆಗಾಗಿ ಗೌಪ್ಯ ಮತದಾನ ವ್ಯವಸ್ಥೆ ಮಾಡಲಾಗಿತ್ತು. ಮತ ಪತ್ರ ನೀಡುವಾಗ ಬೆರಳಿಗೆ ಶಾಯಿ
ಗುರುತು ಹಾಕಿ ನೈಜ ಮತದಾನದ ಕಲ್ಪನೆ ನೀಡಲಾಯಿತು.
ಅದೇ ದಿನ ಸಂಜೆ ೩.೦೦ ಗಂಟೆಗೆ ಸರಿಯಾಗಿ ಅಭ್ಯರ್ಥಿಗಳ ಸಮಕ್ಷಮದಲ್ಲಿ ಶಿಕ್ಷಕಿಯರು ದೈಹಿಕ ಶಿಕ್ಷಕರ ಮಾರ್ಗದರ್ಶನದಂತೆ ಮೂರು ಹಂತಗಳಲ್ಲಿ ಮತ ಎಣಿಕೆ ನೆರವೇರಿಸಿದರು. ಪ್ರತೀ ಹಂತದ ಮತ ಎಣಿಕೆಯ ಬಳಿಕ ದೊರೆತ ಮತಗಳ ಸಂಖ್ಯೆಯನ್ನು ಮಕ್ಕಳಿಗೆ ಧ್ವನಿವರ್ಧಕದ ಮೂಲಕ ಹೇಳಲಾಯಿತು. ಕೊನೆಯ ಹಂತದ ಎಣಿಕೆಯ ಬಳಿಕ ಒಟ್ಟು ದೊರೆತ ಮತಗಳ ಸಂಖ್ಯೆಯನ್ನು ತಿಳಿಸಲಾಯಿತು. ಈ ಬಾರಿಯ ಮತದಾನದಲ್ಲಿ ಅತೀ ಹೆಚ್ಚು ಮತಗಳನ್ನು ೭ ನೇ ತರಗತಿಯ ಆಯುಷ್ ಶೆಟ್ಟಿ ಗಳಿಸಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಆಯ್ಕೆ ಗೊಂಡಿರುವುದಾಗಿ ಘೋಷಿಸಲಾಯಿತು. ೨ ನೇ ಸ್ಥಾನದಲ್ಲಿ ಜೋಯ್ಲನ್ ಪ್ರಿನ್ಸ್ ಡಿ’ಕೋಸ್ತ ಹಾಗೂ ೩ ನೇ ಸ್ಥಾನದಲ್ಲಿ ಸಾನ್ವಿ ಆಯೋನಾ ಲೋಬೋ ಆಯ್ಕೆ ಯಾಗಿರುತ್ತಾರೆ.
ತಾರೀಕು ೧೭-೬-೨೩ ಶನಿವಾರದಂದು ಚುನಾವಣೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಲಾಯಿತು. ೧೦ ಗಂಟೆಗೆ ಸರಿಯಾಗಿ ಶಾಲಾ ಸಂಚಾಲಕರು
ಮುಖ್ಯ ಅತಿಥಿಗಳು , ಮುಖ್ಯೋಪಾಧ್ಯಾಯಿನಿ, ಉಪಮುಖ್ಯೋಪಧ್ಯಾಯರು ಹಾಗೂ ಶಾಲಾ ಸಂಸತ್ತಿನ ಅಭ್ಯರ್ಥಿಗಳನ್ನು ವಾದ್ಯ ಘೋಷದೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು. ವಿದ್ಯಾರ್ಥಿಗಳು ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಚಿತ್ರ ಕಿಣಿಯವರು ಮುಖ್ಯ ಅತಿಥಿಗಳ ಕಿರು ಪರಿಚಯ ಮಾಡಿಸಿದರು. ಮುಖ್ಯ ಅತಿಥಿಗಳು ಮಕ್ಕಳನ್ನು ಉದ್ದೇಶಿಸಿ ಶುಭ ಸಂದೇಶ ನೀಡಿದರು. ಕುಮಾರಿ ಸಂಜನಾ ಳು ದಿಕ್ಸೂಜಿ ಭಾಷಣ ನಿರ್ವಹಿಸಿದರು. ಶಾಲಾಮುಖ್ಯೋಪಾಧ್ಯಾಯಿನಿಯವರಿಂದ ಸಂಸತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ನೀಡಲಾಯಿತು.
ಶಾಲಾ ದೈಹಿಕ ಶಿಕ್ಯಕ ಶ್ರೀ ಅರುಣ್ ರವರು ಮಕ್ಕಳಿಗೆ ಖಾತೆಗಳನ್ನು ಹಂಚಿಕೆ ಮಾಡಿದರು. ಶಾಲಾ ಸಂಚಾಲಕರು, ಮುಖ್ಯಾಅತಿಥಿಗಳು, ಶಾಲಾ Áಮುಖ್ಯೋಪಾಧ್ಯಾಯಿನ್ಯಿಯಿನಿಯವರು ಹಾಗೂ ಉಪ ಮುಖ್ಯೋಪಾಧ್ಯಾಯರು ಅಭ್ಯರ್ಥಿಗಳಿಗೆ ಬ್ಯಾಡ್ಜ್ ತೊಡಿಸಿದರು.
ಪ್ರತಿಖಾತೆಯ ಮೇಲುಸ್ತಿವಾರರನ್ನಾಗಿ ಶಿಕ್ಷಕ್-ಶಿಕ್ಷಕಿಯರನ್ನು ನೇಮಿಸಲಾಯಿತು. ಪದಗ್ರಹಣಗೊಂಡ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾಸಂಚಾಲಕರು ಹಿತವಚನಗಳನ್ನು ನುಡಿದರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಂದ ಧನ್ಯವಾದ ಸಮರ್ಪಣೆ ಮಾಡಿಸಲಾಯಿತು. ಸಾಮೂಹಿಕವಾಗಿ ಶಾಲಾಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

Leave a Reply

Powered By PERWEB SOLUTIONS