ನಶಾ ಮುಕ್ತ ಭಾರತ ಅಭಿಯಾನ
ದಿನಾಂಕ ೧೨-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಬಗ್ಗೆ ಶಿಕ್ಷಕರಾದ ಪದ್ಮನಾಬ್‌ರವರು ಜಾಗೃತಿಯನ್ನು ಮೂಡಿಸಿದರು. ಸುದೃಢ , ಬಲಿಷ್ಠ , ಆರೋಗ್ಯವಂತ ದೇಶಕ್ಕಾಗಿ , ಮಾನಸಿಕವಾಗಿ ತಯಾರು ಗೊಳಿಸುವಲ್ಲಿ ನಶಾ ಮುಕ್ತ ಸಮಾಜದ ಅಗತ್ಯವಿದೆ . ಮನಸ್ಸು ಸ್ಥಿರವಾಗಿದ್ದರೆ ಬಲಿಷ್ಠ ದೇಶ ನಿರ್ಮಣವಾಗುತ್ತದೆ. ಯಾವ ಕುಟುಂಬ , ಸಮಾಜ , ದೇಶ ನಶಾ ವಸ್ತುಗಳಿಗೆ ಗುಲಾಮರಾದಲ್ಲಿ ಆ ದೇಶದ ಭವಿಷ್ಯ ಸರ್ವನಾಶವಾಗುತ್ತದೆ. ಈ ನಿಟ್ಟಿನಲ್ಲಿ ನಶಾ ಮುಕ್ತ ಜಿಲ್ಲೆ , ರಾಜ್ಯ , ದೇಶ ನಿರ್ಮಾಣದಲ್ಲಿ ಇಂದಿನ ಯಾವ ಪೀಳಿಗೆ ಕೈ ಜೋಡಿಸಿದಲ್ಲಿ ನಮ್ಮ ದೇಶ ವಿŒಶ್‌ದಲ್ಲಿಯೇ ಅಗ್ರಸ್ಥಾನವನ್ನು ಹೊಂದಬಹುದು ಎಂದು ಹೇಳಿದರು. ನಂತರ ಮುಖ್ಯೋಪಾಧ್ಯಾಯಿನಿವರಾದ ಶ್ರೀಮತಿ ಜೊಸಿಟ ನೊರೊನ್ನಾ ರವರು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.









