ಅಕ್ಟೋಬರ್ ೨ ಗಾಂಧಿ ಜಯಂತಿ ಆಚರಣೆ
ಅಕ್ಟೋಬರ್ ೨ ೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿಯನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು . ಕಾರ್ಯಕ್ರಮವು ಪ್ರಾರ್ಥನಾ ಗೀತೆಯ ಮೂಲಕ ಪ್ರಾರಂಭವಾಯಿತು. ೭ ನೇ ತರಗತಿಯ ಲೈನಲ್ ಶಾನ್ ನೆರೆದ ಗಣ್ಯರನ್ನು ಮತ್ತು ಪೋಷಕರನ್ನು ಸ್ವಾಗತಿಸಿದನು. ೭ ನೇ ತರಗತಿಯ ಅಕ್ಷಜ್ ಮತ್ತು ೬ ನೇ ತರಗತಿಯ ಶ್ರೀದೇವಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿಯ ಕುರಿತು ಮಾತನಾಡಿದರು. ಗಣ್ಯರು , ಶಿಕ್ಷಕರು ಮತ್ತು ಪೋಷಕರು ಮಹತ್ಮಾ ಗಾಂಧಿ , ಲಾಲ್ ಬಹದ್ದೂರ್ ಶಾಸ್ತಿç ಮತ್ತು ಡಾ | ಬಿ ಆರ್ . ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿಗಳು ರಘುಪತಿ ರಾಘವ ರಾಜಾರಾಂ ಗೀತೆಯನ್ನು ಹಾಡಿದರು. ಉಪಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜ ರವರು ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ÷್ಯ ತಂದು ಕೊಟ್ಟ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ಅಮೂಲ್ಯ ಕೊಡುಗೆಯ ಕುರಿತು ಮಾತಾನಾಡಿದರು. ಲಾಲ್ ಬಹದ್ದೂರ್ ಶಾಸ್ತಿç ಅವರ ಒಳ್ಳೆಯ ಮಾತುಗಳು ಮತ್ತು ಡಾ| ಬಿ ಆರ್ ಅಂಬೇಡ್ಕರ್ ಅವರ ಜಾತ್ಯಾತೀತ ತತ್ವಗಳು ಮತ್ತು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿಗೆ ಧನ್ಯವಾದವನ್ನು ಸಮರ್ಪಿಸಿದರು. ಪ್ರಕೃತಿ ಮತ್ತು ಮಾತೃತ್ವ ಎರಡನ್ನು ಗೌರವಿಸುವ ಪ್ರತೀಕವಾಗಿ ಪ್ರತಿ ಮರಕ್ಕೂ ಅಮ್ಮ ಎಂದು ಹೆಸರಿಸಲು ಪ್ರೋತ್ಸಾಹಿಸಿದ ಅವರು ಗಿಡಗಳನ್ನು ನೆಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಸ್ವಚ್ಛ ಭಾರತ್ ಅಭಿಯಾನಕ್ಕೆ ಅನುಗುಣವಾಗಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಕೆಲವು ವಿದ್ಯಾರ್ಥಿಗಳಿಗೆ ಮತ್ತು ತಾಯಂದಿರಿಗೆ ಸಸಿಗಳನ್ನು ವಿತರಿಸಲಾಯಿತು. ಅವರು ಅವುಗಳನ್ನು ಪೋಷಿಸುವ ಮತ್ತು ರಕ್ಷಿಸುವ ಭರವಸೆ ನೀಡಿದರು . ನಂತರ ಮುಖ್ಯೋಪಾಧ್ಯಾಯಿನಿಯವರು ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ೭ ನೇ ತರಗತಿಯ ಸಾರಾ ಅವರ ವಂದನಾರ್ಪಣೆಯೊAದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು.


















