ನಮ್ಮ ಹೆಮ್ಮೆಯ ಶಿಕ್ಷಕಿ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭ
ದಿನಾಂಕ ೩೦-೯-೨೦೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಶಿಕ್ಷಕಿಯಾದ ಶ್ರೀಮತಿ ಅನಿತಾ ಪಾಯಿಸ್ ರವರಿಗೆ ಶುಭ ವಿದಾಯ ಸನ್ಮಾನ ಸಮಾರಂಭವು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ವಂ ಜೋನ್ಸನ್ ಪಿಂಟೊ ಎಸ್.ಜೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ೭ ನೇ ತರಗತಿಯ ಲೈನಲ್ ಶಾನ್ ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದನು. ೧ ನೇ ತರಗತಿಯ ಇವಾನ್ ಮಸ್ಕರೇನಸ್ ಮತ್ತು ೭ ನೇ ತರಗತಿಯ ಗ್ಯಾವಿನ್ ¥s಼ೆರ್ನಾಂಡಿಸ್ ತಮ್ಮ ಶಿಕ್ಷಕಿಯ ಬಗ್ಗೆ ಕೃತಜ್ಞತೆಯ ಮಾತುಗಳನ್ನು ಆಡಿದರು. ಉಪಮುಖ್ಯೋಪಾಧ್ಯಾಯರಾದ ಲೀಯ ಡಿಸೋಜರವರು ಶುಭ ವಿದಾಯ ಸನ್ಮಾನ ಪತ್ರವನ್ನು ವಾಚಿಸಿದರು. ಶ್ರೀಮತಿ ಅನಿತಾ ಪಾಯಿಸ್ ಅವರ ಅತ್ಯುತ್ತಮ ಸೇವೆಗಾಗಿ ಶಾಲು ಹೊದಿಸಿ ಹಣ್ಣುಹಂಪಲು ನೀಡಿ ಸನ್ಮಾನ ಪತ್ರ ಕೊಟ್ಟು ಗೌರವಿಸಿದರು. ಮಕ್ಕಳು ಪ್ರೀತಿಯಿಂದ ಹೂಗಳನ್ನು ಕೊಟ್ಟು ತಮ್ಮ ಪ್ರೀತಿಯ ಶಿಕ್ಷಕಿಗೆ ವಿದಾಯ ಹೇಳಿದರು. ನಿವೃತ್ತಿ ಶಿಕ್ಷಕಿ ಶ್ರೀಮತಿ ಅನಿತಾ ಪಾಯಿಸ್ ಮಾತನಾಡಿ ೪೦ ವರುಷದ ಈ ಅನುಭವವು ನನಗೆ ಈ ಸಂಸ್ಥೆಯಲ್ಲಿ ಸಂತೋಷವನ್ನು ನೀಡಿದೆ. ಹಾಗೆಯೇ ಮಕ್ಕಳಿಗೆ ನಿಮ್ಮ ವಿದ್ಯಾಭ್ಯಾಸದ ಪಯಣದಲ್ಲಿ ನಿಮ್ಮ ವಿದ್ಯಾಭ್ಯಾಸವು ನಿರಂತರವಾಗಿರಲಿ, ನೀವು ವಿದ್ಯಾಭ್ಯಾಸ ಮಾಡುತ್ತಿದಂತೆ ಮೌಲ್ಯಗಳನ್ನು ಅಳವಡಿಸಿ ,ಹೆತ್ತವರಿಗೆ ಗೌರವ ಕೊಟ್ಟು ನಿಮ್ಮ ಮನೆಗೂ ಮತ್ತು ಸಮಾಜಕ್ಕೂ ಒಳ್ಳೆಯದು ಮಾಡಿ ಎಂದು ಹೇಳಿದರು. ಸಂಚಾಲಕರಾದ ವಂದನೀಯ ಜೊನ್ಸನ್ ಪಿಂಟೊ ಎಸ್.ಜೆ ಮಾತನಾಡಿ ಶ್ರೀಮತಿ ಅನಿತಾ ಪಾಯಿಸ್ ಅವರ ನಾಲ್ಕು ದಶಕಗಳ ಸಮರ್ಪಿತ ಸೇವೆಗಾಗಿ ಧನ್ಯವಾದ ಅರ್ಪಿಸಿದರು. ಅತ್ಯುತ್ತಮ ಶಿಕ್ಷಕರು ಪುಸ್ತಕದಿಂದಲ್ಲ ಹೃದಯದಿಂದ ಕಲಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ೭ ನೇ ತರಗತಿಯ ರಿಯಾನ್ ಡಿಸಿಲ್ವ ಮತ್ತು ಆರನ್ ಡಿಸೋಜ ನಿರ್ವಹಿಸಿರು. ಸಾರಾ ಮತ್ತು ಜೋವಿಯಾ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಮಾಡಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.





















