hmaloysiusprimary@gmail.com +91-824-2449728

Republic Day Report Celebration 2024

ನಮ್ಮ ದೇಶದ 75 ನೇ ಗಣ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಳಗ್ಗೆ 8.30ಕ್ಕೆ ಸರಿಯಾಗಿ ಶಾಲಾ ಸಂಚಾಲಕರು ‘ ಮುಖ್ಯೋಪಾಧ್ಯಾಯಿನಿ ಹಾಗೂ ಮುಖ್ಯ ಅತಿಥಿಯವರನ್ನು ಶಾಲಾ ವಾದ್ಯ ಗೋಷ್ಠಿಯ ಗೌರವದ ಮೂಲಕ ವೇದಿಕೆಗೆ ಕರೆತರಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಯುತ ಸ್ಯಾಮುವೆಲ್ ಪೀಟರ್ ರವರು ಧ್ವಜಾರೋಹಣ ನೆರವೇರಿಸಿದರು. 7 ನೇ ತರಗತಿ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು. ಧ್ವಜಗೀತೆ, ರಾಷ್ಟ್ರಗೀತೆ, ಪ್ರಾರ್ಥನೆಗಳು ಉತ್ತಮವಾಗಿ ಹಾಡಿದರು. ದಿನದ ಮಹತ್ವವನ್ನು ಕುಮಾರಿ ಅಶ್ವಿನಿ ತಿಳಿಸಿದಳು. ಮುಖ್ಯ ಅತಿಥಿಗಳು ತಮ್ಮ ಅಮೂಲ್ಯ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳಿಂದ ಸುಂದರವಾದ ನೃತ್ಯ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು. ವಿಕ್ರಂ ಶೆಣೈ ಧನ್ಯವಾದ ಸಮರ್ಪಣೆ ಮಾಡುವುದ ರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಇದರ ಜೊತೆಗೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು.

Leave a Reply

Powered By PERWEB SOLUTIONS