hmaloysiusprimary@gmail.com +91-824-2449728

Karnataka Rajyotsava Celebration – 2022

ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಕೊಡಿಯಲ್ ಬೈಲ್ ಇಲ್ಲಿ ನವೆಂಬರ್ ೧ರಂದು ೬೭ನೇ ಕನ್ನಡ ರಾಜ್ಯೋತ್ಸ ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆಯಾಗಿರುವ ಮಂಗಳಾ ರೈಯವರು ವಹಿಸಿಕೊಂಡರು. ತಮ್ಮ ಭಾಷಣದಲ್ಲಿ ಕನ್ನಡ ನಾಡು ನುಡಿಗಳ ಏಳಿಗೆ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು. ಕನ್ನಡ ಭಾಷೆಯನ್ನು ಮಾತನಾಡಬೇಕು. ಕನ್ನಡ ಪುಸ್ತಕ ಓದಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಮಧುರವಾದ ಕನ್ನಡ ಗೀತೆಗಳ ಗಾಯನ ನಡೆಯಿತು. ವಿದ್ಯಾರ್ಥಿಗಳು ಕನ್ನಡದ ಇಂಪಾದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಈ ಸುಂದರ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜೊಸ್ವೀಟಾ ನೊರೊನಾ, ಶಾಲಾ ನಾಯಕ ಅಭೀಶ್ ಉಪನಾಯಕ ಲಗನ್ ಜೆ,ಸ್ ಉಪಸ್ಥಿತರಿದ್ದರು. ೭ನೇ ತರಗತಿಯ ಪೂರ್ಣೇಶ್ ಕನ್ನಡ ರಾಜೋತ್ಸವದ ಬಗ್ಗೆ ಎಲ್ಲರಿಗೂ ವಿವರಿಸಿದನು.

ಕುಮಾರಿ ಸಂಜನಾ ೫ನೇ ತರಗತಿ ಹಾಗೂ ಅಶ್ವಿನಿ ೫ನೇ ತರಗತಿ ಎಲ್ಲರನ್ನು ಸ್ವಾಗತಿಸಿದರು. ಕುಮಾರಿ ಸಾರಾ ಎಲ್ಲರಿಗೂ ವಂದಿಸಿದಳು. ರತನ್ ಆರ್ ಭಟ್, ಮನ್ವಿತ್,ಪ್ರಿನ್ಸ್ ಆಲಿಶ್, ಆರುಷ್, ಕೆ ಆನೀಶ್, ಆದರ್ಶ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ್ ಮುಕ್ತಾಯಗೊಂಡಿತು. ಈ ಸುಂದರ ಕಾರ್ಯ ಕ್ರಮಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಸಾಕಿಯಾದರು

Leave a Reply

Powered By PERWEB SOLUTIONS