hmaloysiusprimary@gmail.com +91-824-2449728

Animal and Pet Care Programme – 2024

ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
ಶಾಲಾ ಹಳೆ ವಿದ್ಯಾರ್ಥಿಸಂಘ ಮತ್ತು ಪ್ರಾಣಿದಯಾ ಸಂಘದ ಸಹಯೋಗದೊಂದಿಗೆ ಸಾಕು ಪ್ರಾಣಿಗಳ ಆರೈಕೆಯ ಬಗ್ಗೆ ದಿನಾಂಕ ೨೯-೬-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಾಣಿದಯಾ ಸಂಘ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ಚಾಲ್ಸ್ ಪೌಲ್ ಮತ್ತು ಸದಸ್ಯರಾದ ಶ್ರೀ ಶಾನ್ ಫೆರ್ನಾಂಡಿಸ್ ಮತ್ತು ಮೇಡಮ್ ಚಂದ್ರಿಕ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ರವರು ಸ್ವಾಗತಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶ್ರೀ ಶಾನ್ ಫೆರ್ನಾಂಡಿಸ್ ರವರು ಪ್ರಾಣಿ ದಯಾ ಸಂಘದ ಕಾರ್ಯಗಳು, ಅದರ ಅಗತ್ಯತೆಗಳು , ಉದ್ದೇಶಗಳು , ಧ್ಯೇಯಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು. ಮೇಡಮ್ ಚಂದ್ರಿಕ ರವರು ಪ್ರಾಣಿಗಳ ಜನನ ಪ್ರಾಮಾಣವನ್ನು ಹೇಗೆ ನಿಯಂತ್ರಿಸುವುದು ಮತ್ತು ಪ್ರಾಣಿಗಳಿಗೆ ನೀಡುವ ಚುಚ್ಚು ಮದ್ದಿನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ನಂತರ ಮಾತಾನಾಡಿದ ಪ್ರಾಣಿದಯಾ ಸಂಘದ ಸಂಸ್ಥಾಪಕರಾದ ಚಾಲ್ಸ್ ಪೌಲ್ ರವರು ಪ್ರಾಣಿಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಿದರು .ಹಳೆ ವಿದ್ಯಾರ್ಥಿಯಾದ ಶ್ರೀ ಡ್ಯಾನಿಯಲ್ ರವರು ನೆರೆದವರಿಗೆಲ್ಲವಂದಾನಾರ್ಪಣೆ ಮಾಡಿದರು.ಈ ಕಾರ್ಯಕ್ರಮಕ್ಕೆ ಹಳೆವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Powered By PERWEB SOLUTIONS