ಅಂತರಾಷ್ಟಿçÃಯ ೧೦ ನೇ ವರ್ಷದ ಯೋಗ ದಿನಾಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೧.೬.೨೦೨೪ ರಂದು ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅವಿನಾಶ್ ಡಿಸೋಜರವರು ಉಪಸ್ಥಿತರಿದ್ದರು. ಶಾಲೆಯ ಸಂಚಾಲಕರಾದ ಫಾ| ಜೋನ್ ಡಿಸೋಜ ಎಸ್.ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನಾ ಮತ್ತು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ವಿಕ್ಟರ್ ಸೆರಾವೊರವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀ ಅರುಣ್ ಬ್ಯಾಪ್ಟಿಸ್ಟ್ ರವರು ಯೋಗದ ಮಹತ್ವವನ್ನು ತಿಳಿಸಿದರು. ಇನ್ನೊಬ್ಬ ದೈಹಿಕ ಶಿಕ್ಷಕರಾದ ಹರೀಶ್‌ರವರು ಯೋಗವು ದೀರ್ಘಕಾಲದ ಜೀವನವನ್ನು ಸಾಗಿಸಲು ತುಂಬಾ ಉಪಕಾರಿ ಎಂದು ಹೇಳಿದರು. ಮತ್ತು ಮಕ್ಕಳಿಗೆ ೬ ನಮೂನೆಯ ಯೋಗದ ಆಸನಗಳನ್ನು ತೋರಿಸಿ ಕೊಟ್ಟು ಮಕ್ಕಳಿಂದ ಮಾಡಿಸಿದರು. ಈ ಯೋಗ ಕಾರ್ಯಕ್ರಮಕ್ಕೆ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.