ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ 2024-25 ರ ಹೊಸ ಶೈಕ್ಷಣಿಕ ವರ್ಷವು 31 ಮೇ 2024 ರಂದು ಪುನಃ ಆರಂಭಿಸಲಾಯಿತು. ಶಾಲೆಯ ವಿದ್ಯಾರ್ಥಿಗಳನ್ನು ಸ್ವಾಗತಿಸಲು ವಿಶೇಷ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಾರ್ಥನಾ ಕಾರ್ಯಕ್ರಮವು ಸರ್ವಶಕ್ತ ಭಗವಂತನ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು.
ಶಾಲೆಯ ಸಂಚಾಲಕರಾದ ವಂದನೀಯ ಫಾ.ಜಾನ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ಹ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವಿಕ್ಟರ್ ಸೆರಾವೊ ಮತ್ತು 1ನೇ ತರಗತಿಯ ವಿದ್ಯಾರ್ಥಿ ದೀಪ ಬೆಳಗಿಸಿದರು.
2021 – 22 ಮತ್ತು 2022- 23 ರ ಶೈಕ್ಷಣಿಕ ವರ್ಷದ ಶಾಲಾ ಮ್ಯಾಗಝೀನ್ ನನ್ನು ಶಾಲೆಯ ಸಂಚಾಲಕರಾದ ವಂದನೀಯ ಫಾ.ಜಾನ್ ಡಿಸೋಜಾರವರು ಬಿಡುಗಡೆ ಮಾಡಿದರು ನಂತರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿದರು ಹಾಗೂ ಆ ಕನಸುಗಳನ್ನು ನನಸು ಮಾಡುವಂತೆ ಹೇಳಿದರು ಮತ್ತು ನಮ್ಮ ಶಾಲೆಯು ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ಪ್ರತಿಯೊಂದು ಮಗುವೂ ಫಲಭರಿತ ಮರವಾಗಬೇಕು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ಜೊಸಿಟಾ ನೊರೋನ್ಹಾ ನೂತನ ಶಿಕ್ಷಕರನ್ನು ಪರಿಚಯಿಸಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಎರಡು ತಿಂಗಳ ಕಾಲ ಶಾಲೆಯು ಮರುಭೂಮಿಯಂತಿತ್ತು ಮತ್ತು ಈಗ ಅದು ರೋಮಾಂಚಕ ಬಣ್ಣಗಳಿಂದ ತುಂಬಿದೆ ಎಂದು ಅವರು ಹೇಳಿದರು.
ಶಾಲಾ ಗೀತೆಯನ್ನು ಹಾಡುವುದರೊಂದಿಗೆ ಸಭಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು
ಮಕ್ಕಳಿಗೆ ಸಿಹಿ ವಿತರಿಸಲಾಯಿತು.










