ವಿಶ್ವ ಪರಿಸರ ದಿನ
ಇಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 7 ನೇ ತರಗತಿ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಮಹತ್ವ ಹಾಗೂ ಜಾರಿಗೆ ಬಂದ ದಿನದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನದ ಸಂಕೇತವಾಗಿ ಮುಖ್ಯೋಪಾದ್ಯಾಯಿನಿಯವರಿಗೆ ಗಿಡವನ್ನು ನೀಡಲಾಯಿತು. 7 ನೇ ತರಗತಿಯ ಶಿಕ್ಷಕಿಯರು ಕೂಡ ಗಿಡಗಳನ್ನು ನೀಡಿದರು. ನಂತರ ಮುಖ್ಯೋಪಾದ್ಯಾಯಿನಿಯವರು ಈ ದಿನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ತಮ್ಮ ಮನೆಯ ಸುತ್ತ ಮುತ್ತ ಆದಷ್ಟು ಗಿಡಗಳನ್ನು ನೆಟ್ಟು ಬೆಳೆಸಿರಿ ಎಂಬ ಕಿವಿ ಮಾತನ್ನು ಹೇಳಿದರು. ಶಾಲಾ ಅಸೆಂಬ್ಲಿಯ ಜೊತೆಯಲ್ಲಿ ವಿಶ್ವಪರಿಸರ ದಿನವನ್ನು ಎಲ್ಲರೂ ಒಟ್ಟಾಗಿ ಆಚರಿಸಿದೆವು. ಕೊನೆಗೆ ನಾಡ ಗೀತೆ ಹಾಗೂ ರಾಷ್ಟ್ರ ಗೀತೆಯೊಂದಿಗೆ ಕಾರ್ಯ ಕ್ರಮವನ್ನು ಮುಕ್ತಾಯಗೊಳಿಸಲಾಯಿತು.