ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಕ್ವಿಜ್
ದಿನಾಂಕ ೨೭-೧೦-೨೪ ರಂದು ಬೆಳಿಗ್ಗೆ ೯ ಗಂಟೆಗೆ ಕೊಡಿಯಾಲ್ ಬೈಲ್ ಸಂತ ಎಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಾಮಾನ್ಯ ವಿದ್ಯಾರ್ಥಿಗಳು ಮತ್ತು ವಿಶೇಷ ಸಾಮಥ್ಯದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ “ಅಲೋಯ್-ಕ್ವಿಝಾರ್ಡ್” ೨೦೨೪ ರಸಪ್ರಶ್ನೆ ಕಾರ್ಯಕ್ರಮವನ್ನು ಅಯೋಜಿಸಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರೀಜೇಶ್ ಚೌಟ , ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ| ಮೆಲ್ವಿನ್ ಪಿಂಟೊ ಎಸ್.ಜೆ , ಫಾ| ಜೋನ್ ಡಿಸೋಜ ಎಸ್.ಜೆ , ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಕ್ರಿಸ್ಟೋಫರ್ ಡಿಸೋಜ ನೆರೆದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ಸಾಮರ್ಥ್ಯದ ಮಕ್ಕಳ ಸಾಮರ್ಥ್ಯದ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದು , ಅವರು ಇತರ ವಿದ್ಯಾರ್ಥಿಗಳೊಂದಿಗೆ ಬೆರೆಯುವಂತೆ ಮಾಡುವುದು , ಸಾಮಾನ್ಯ ಮಕ್ಕಳು ವಿಶೇಷ ಸಾಮರ್ಥ್ಯದ ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸಿ ಭವಿಷ್ಯದಲ್ಲಿ ಅಂತಹ ಮಕ್ಕಳ ಬಗ್ಗೆ ಕಾಳಜಿ ಬೆಳೆಸಲು ಈ ಕ್ವಿಜ್‌ನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯು ಐದು ತಂಡಗಳೊAದಿಗೆ ಎರಡು ಸೆಮಿಪೈನಲ್ ಸುತ್ತುಗಳನ್ನು ಒಳಗೊಂಡಿತ್ತು. ಪ್ರತಿಯೊಂದು ದೃಷ್ಟಿಹೀನ ಮತ್ತು ಶ್ರವಣದೋಷವುಳ್ಳವರು ಸೇರಿದಂತೆ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಅಂತಿಮ ಸುತ್ತಿನಲ್ಲಿ ಆರು ತಂಡಗಳು ನಾಲ್ಕು ಆಕರ್ಷಕ ಸುತ್ತುಗಳಲ್ಲಿ ಸ್ಪರ್ಧಿಸಿದವು. ಬ್ರೆöÊಲ್ ಸುತ್ತು , ಸಾಮಾನ್ಯ ರಸಪ್ರಶ್ನೆ ಸುತ್ತು ,ಮೂಕಾಭಿನಯ ಸುತ್ತು ಮತ್ತು ಕನ್ನಡ ಪ್ರಶ್ನಾವಳಿಗಳು ನಡೆದವು . ೫ ನೇ ತಂಡವು ವಿಜೇತರಾಗಿ ಹೊರಹೊಮ್ಮಿತು. ತಂಡದ ಸದಸ್ಯರಾದ ವಿಷ್ಣು ದೇವ್ ಪಾಂಡೆ, ಅವಿಕಾ ಜೋಷಿ, ಪ್ರವೀಣ್ ಲಕ್ಷಣ್ , ಎನ್ ನಿಶಾನ್ ಮತ್ತು ಅದಿತ್ಯ ಎಂ ಅವರಿಗೆ ಪ್ರಮಾಣ ಪತ್ರ ಮತ್ತು ಟ್ರೋಪಿಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಗಳನ್ನು ನೀಡಲಾಯಿತು. ಪ್ರೇಕ್ಷಕರಿಗೂ ಕೂಡ ರಸಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಸರಿಯಾದ ಉತ್ತರ ನೀಡಿದವರಿಗೆ ವೋಚರ್ ಗಳನ್ನು ನೀಡಲಾಯಿತು. ಸಂಘದ ಕಾರ್ಯದರ್ಶಿಯಾದ ನೀಲ್ ರೊಡ್ರಿಗಸ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಪ್ರಯೋಜಕರಾದ ಮತ್ತು ನೇರಪ್ರಸಾರ ಮಾಡಿದ ದೈಜಿವಲ್ಡ್ ಮಾಧ್ಯಮಕ್ಕೆ ಕೃತಜ್ಞತೆ ಸಲ್ಲಿಸಿದರು.











