hmaloysiusprimary@gmail.com +91-824-2449728

Prathibha Karanji – 2024

ಬಲ್ಮಠ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ದಿನಾAಕ ೨೩-೮-೨೦೨೪ ರಂದು ೨೦೨೪-೨೫ ನೇ ಸಾಲಿನ ಬಲ್ಮಠ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಹಂತದ ಪ್ರತಿಭಾ ಕಾರಂಜಿಯು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಾಡಗೀತೆ ಹಾಡುವುದರ ಮೂಲಕ ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ತಾಲೂಕು ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಲಲಿತಾ ರಾವ್ , ಶಿಕ್ಷಣ ಸಂಯೋಜಕಿಯಾಗಿರುವ ಶ್ರೀಮತಿ ಪ್ರಮೀಳ, ಬಲ್ಮಠ ಕ್ಲಸ್ಟರ್ ಮಟ್ಟದ ಸಿ .ಆರ್. ಪಿ ಯಾಗಿರುವ ಶ್ರೀಯುತ ಪ್ರಸಾದ್ , ಶಾಲೆಯ ಸಂಚಾಲಕರಾಗಿರುವ ವಂದನೀಯ ಫಾ| ಜೋನ್ಸನ್ ಪಿಂಟೊ , ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಮತ್ತು ಉಪಮುಖ್ಯೋಪಾಧ್ಯಾಯರಾಗಿರುವ ಶ್ರೀ ಲೀಯಾ ಡಿಸೋಜರವರು ಉಪಸ್ಥಿತರಿದ್ದರು. ನೆರೆದಿರುವ ಎಲ್ಲರನ್ನು ಮುಖ್ಯೋಪಾಧ್ಯಾಯಿನಿಯವರು ಸ್ವಾಗತಿಸಿದರು. ನಂತರ ಗಣ್ಯರು ದೀಪವನ್ನು ಬೆಳಗಿಸುವುದರೊಂದಿಗೆ ಪ್ರತಿಭಾ ಕಾರಂಜಿಯ ಉದ್ಘಾಟನೆ ಮಾಡಿದರು. ನಂತರ ಮಾತಾನಾಡಿದ ಸಂಚಾಲಕರು ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಪಠ್ಯೇತರ ಚಟುವಟಿಕೆಗಳು ತುಂಬಾ ಅಗತ್ಯವಿದೆ ಎಂದು ಹೇಳಿದರು. ನೋಡಲ್ ಅಧಿಕಾರಿ ಗೀತ ರಾವ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬೇಕು ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಲ್ಲ ಭಾಗವಹಿಸುವಿಕೆ ಅಗತ್ಯ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ವಿವಿಧ ಕೊಠಡಿಗಳಿಗೆ ತೆರಳಿದರು. ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಿ.ಅರ್ ಪಿ ಪ್ರಸಾದ್‌ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು. ಶಿಕ್ಷಕಿಯಾದ ಐರಿನ್ ಪೈಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಜನಗಣ ಮನ ಹಾಡುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Leave a Reply

Powered By PERWEB SOLUTIONS