ಸಂತ ಇಗ್ನೇಶಿಯಸ್ರವರ ಹಬ್ಬದ ಆಚರಣೆ
ದಿನಾಂಕ ೬-೮-೨೦೨೪ ರಂದು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸ್ವಿಟ್ ಸಭೆಯ ಸಂಸ್ಥಾಪಕರಾದ ಸಂತ ಇಗ್ನೇಶಿಯಸ್ಹಬ್ಬದ ಆಚರಣೆ ಶಾಲೆಯ ಸಭಾಭವನದಲ್ಲಿ ಬಹಳ ಗೌರವದಿಂದ ಆಚರಿಸಲಾಯಿತು.
ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ೭ ನೇ ತರಗತಿಯ ಆಲ್ವಿಟ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ೭ ನೇ ತರಗತಿಂiÀi ದಿಲಾನ್ ಮತ್ತು ಆರನ್ ಇಗ್ನೇಶಿಯಸ್ ಹಬ್ಬದ ಮಹತ್ವವನ್ನು ವಿವರಿಸಿದರು.
ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಮುಖ್ಯೋಪಾಧ್ಯಾಯಿನಿಯವರು ವಿತರಿಸಿದರು.
ನಂತರ ಮಾತನಾಡಿದ ಮುಖ್ಯೋಪಾಧ್ಯಾಯಿನಿಯವರು ಸಂತ ಇಗ್ನೇಶಿಯಸ್ ಲೊಯೊಲಾ ಅವರ ಜೀವನದ ಕುರಿತು ಮಹತ್ವದ ಸಂದೇಶ ನೀಡಿದರು.
“ಪ್ರೀತಿಯು ಪದಗಳಿಗಿಂತ ಹೆಚ್ಚಾಗಿ ಕಾರ್ಯಗಳಲ್ಲಿ ತನ್ನನ್ನು ತಾನು ತೋರಿಸಬೇಕು ಎಂದು ಹೇಳಿದರು. ೭ ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಮತ್ತು ಸಂತ ಇಗ್ನೇಶಿಯಸ್ ಅವರ ಜೀವನಕ್ಕೆ ಸಂಬAಧಿಸಿದ ಕಿರುನಾಟಕವನ್ನು ಪ್ರದರ್ಶಿಸಿದರು. ರಿಯಾನ್ , ಭವಿಶ್, ಜೇಡನ್ ಮತ್ತು ಡೆನ್ಸಿಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಧನ್ ರಾಜ್ ಮತ್ತು ಸಂಜನಾ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯ ವಾಯಿತು.


















