hmaloysiusprimary@gmail.com +91-824-2449728

Eid Mubarak – Bakrid Feast Celebration -2024

ಬಕ್ರೀದ್ ಹಬ್ಬದ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೫.೬.೨೦೨೪ ರಂದು ಬಕ್ರೀದ್ ಹಬ್ಬದ ಆಚರಣೆ ನಡೆಯಿತು. ೨ ನೇ ತರಗತಿಯ ಮಕ್ಕಳು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ೨ ನೇ ತರಗತಿಯ ಮೊನ್ವಿ ಬಕ್ರೀದ್ ಹಬ್ಬದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದಳು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕರಾದ ಫಾ ಜೋನ್ ಡಿಸೋಜ ಎಸ್. ಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟಾ ನೊರೊನ್ನಾ ಉಪ ಮುಖ್ಯೋಪಾಧ್ಯಾಯರಾದ ಲೀಯಾ ಡಿಸೋಜರವರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿಯವರು ನಮ್ಮ ಸಂಸ್ಥೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತದೆ .ಹಾಗೆಯೇ ಎಲ್ಲಾ ಮಕ್ಕಳು ಎಲ್ಲಾ ಧರ್ಮದವರನ್ನು ಸಮಾನವಾಗಿ ನೋಡಬೇಕು ಎಂದು ಕಿವಿಮಾತು ಹೇಳಿದರು. ಮತ್ತು ಅವರು ಎಲ್ಲಾ ಮುಸ್ಲಿಂ ಮಕ್ಕಳ ಹೆತ್ತವರಿಗೆ ಹಬ್ಬದ ಶುಭಾಶಯ ಕೋರಿದರು.

Leave a Reply

Powered By PERWEB SOLUTIONS