hmaloysiusprimary@gmail.com +91-824-2449728

Christmas Celebration – 2025

ಕ್ರಿಸ್ಮಸ್ ಹಬ್ಬದ ಆಚರಣೆ
ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟ ನೊರೊನ್ನಾ ಉಪಮುಖ್ಯೋಪಾಧ್ಯಾಯರಾದ ಶ್ರೀ ಲೀಯಾ ಡಿಸೋಜ ರವರು ಉಪಸ್ಥಿತರಿದ್ದರು.
ಸಂತೋಷ , ಶಾಂತಿ , ಭರವಸೆ ,ದಯೆ ಹಂಚಿಕೆ ಮತ್ತು ಪ್ರೀತಿಯಂತಹ ನೃತ್ಯ ರೂಪಕಗಳು ಮತ್ತು ಕಿರು ಪ್ರಸಂಗಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡಿದರು. ಉಪಮುಖ್ಯೋಪಾಧ್ಯಾಯರಸ್ಥಾನದಿಂದ ಮಾತಾನಾಡಿದ ಶ್ರೀ ಲಿಯಾ ಡಿಸೋಜಾ ರವರು ನಿಮ್ಮ ನೆರೆಯವನ್ನು ನಿಮ್ಮಂತೆಯೇ ಪ್ರೀತಿಸಿ ಕೃತಜ್ಞರಾಗಿರಿ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿಯಾದ ಶ್ರೀಮತಿ ಆನೆಟ್ ಬಿಂದು ಈ ದಿನದ ಮಹತ್ವ ತಿಳಿಸಿದರು.. ಶಿಕ್ಷಕಿಯಾದ ಶ್ರೀಮತಿ ಆನಂದಿ ಡಿಸೋಜಾ ನೆರೆದ ಎಲ್ಲರಿಗೂ ಸ್ವಾಗತಿಸಿದರು.ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿದರು. ಶಿಕ್ಷಕಿಯಾದ ಶ್ರೀಮತಿ ತನಿಯ ಡಿಸಿಲ್ವಾ ಕಾರ್ಯಕ್ರಮದ ನಿರೂಪಣೆ ಮಾಡಿದರು.ಶಿಕ್ಷಕಿಯಾದ ಶ್ರೀಮತಿ ಸ್ವಾತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು .

Leave a Reply

Powered By PERWEB SOLUTIONS