ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾ ಕೂಟವು ನವೆಂಬರ್ 13,2025ರಂದು ಮಂಗಳ ಕ್ರೀಡಾಂಗಣದಲ್ಲಿ ವಿಜೃಂಭನೆಯಿಂದ ನಡೆಯಿತು.ಬೆಳಿಗ್ಗೆ 9:00 ಗಂಟೆಗೆ ಕಾರ್ಯಕ್ರಮವು ಮಧುರವಾದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭ ವಾಯಿತು. ಶಾಲಾ ಸಂಚಾಲಕರು ಹಾಗೂ ಸಂತ ಅಲೋಶಿಯಸ್ ಪ್ರೌಢ ಶಾಲೆ ಯ ಮುಖ್ಯೋಪಾಧ್ಯಾಯರಾದ ವಂದನಿಯ ಫಾದರ್ ಜಾನ್ಸನ್ ಪಿಂಟೋ SJ ರವರು ಧ್ವಜಾರೋಹಣ ಮಾಡುವುದರ ಮೂಲಕ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಶಿಸ್ತಿನ ಪಥ ಸಂಚಲನದ ಮೂಲಕ ಮುಖ್ಯ ಅತಿಥಿಗಳಿಗೆ ಗೌರವವನ್ನು ಸಲ್ಲಿಸಿದರು.
- ಪ್ರಾಪ್ತಿ ಜಯಪ್ರಸಂತ್ – ರಾಷ್ಟ್ರೀಯ ಮಟ್ಟದ ಈಜುಗಾರ್ತಿ
- ಸ್ನಿತಿಕ್ – ರಾಷ್ಟ್ರೀಯ ಮಟ್ಟದ ಈಜುಗಾರ
- ಜ್ಯೇಷ್ಠಾ ಆರ್. ಬಂಗೇರಾ – ರಾಜ್ಯ ಮಟ್ಟದ ಈಜುಗಾರ್ತಿ
- . ಸ್ನವಿಥಿ – ರಾಜ್ಯ ಮಟ್ಟದ ಸ್ಕೇಟರ್
- ಅಭಿಗ್ನಾ – ರಾಜ್ಯ ಮಟ್ಟದ ಸ್ಕೇಟರ್
- ಆಯುಷ್ ಆರ್. ಕುಮಾರ್ – ವಿಭಾಗ ಮಟ್ಟದ ಬ್ಯಾಡ್ಮಿಂಟನ್ ಆಟಗಾರ
- ಸಾದ್ ಸಾಜಿದ್ – ವಿಭಾಗ ಮಟ್ಟದ ಬ್ಯಾಡ್ಮಿಂಟನ್ ಆಟಗಾರ
- ಅಸಿನ್ ಜೆ.ಎಸ್.
- ಶಾಲನ್ ಪೆರೇರಾ
- ನಿಧಿ ಕಿರಣ್
- ನಿಷಿಕಾ ಸುರ್ವಣ
- ಸುಝೈನ್ ರಿಯಾ – ವಿಭಾಗ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ. ಹೆಮ್ಮೆಯ ನಮ್ಮ ಶಾಲಾ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ತಂದು ಕ್ರೀಡಾಕೂಟಕ್ಕೆ ಮೆರೆಗು ನೀಡಿದರು. ಕ್ರೀಡಾ ಜ್ಯೋತಿಯನ್ನು
ಮುಖ್ಯ ಅತಿಥಿಗೆ ಹಸ್ತಾಂತರಿಸಿ,ಮುಖ್ಯ ಅತಿಥಿಗಳು ಅದನ್ನು ಮತ್ತೆ ಕ್ರೀಡಾಪಟುಗಳಿಗೆ ನೀಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ”ಗೆಲುವು ಮುಖ್ಯವಲ್ಲ, ಪ್ರತಿಯೊಬ್ಬರು ಸ್ವದ್ರೆಯಲ್ಲಿ ಭಾಗವಹಿಸುವ ಛಲ ಇರಬೇಕು ಎಂಬ ಸಂದೇಶ ನೀಡಿದರು.ನೆರೆದಿರುವ ಎಲ್ಲಾ ಗಣ್ಯರನ್ನು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜೊಸ್ವೀಟಾ ನೊರೊನ್ಹಾ ರವರು ಸ್ವಾಗತಿಸಿದರು. ಉಪಮುಖ್ಯ ಉಪಾಧ್ಯಾಯರಾದ ಶ್ರೀ ಲೀಯಾ ಡಿಸೋಜರವರು ಧನ್ಯವಾದಗಳು ಸಮರ್ಪಿಸಿದರು. ಶಿಕ್ಷಕಿ ಶ್ರೀಮತಿ ತಾನ್ಯಾ ಡಿಸಿಲ್ವ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಮಾಸ್ಟರ್ ಆಯುಷ್ ಕುಮಾರ್ ಕ್ರೀಡಾ ಕಾರ್ಯದರ್ಶಿ ಕ್ರೀಡಾ ಪ್ರತಿಜ್ಞೆಯನ್ನು ಎಲ್ಲಾ ಕ್ರೀಡಾಪಟುಗಳಿಗೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ಕ್ಷರ ಸಂಘದ ಉಪಾಧ್ಯಕ್ಷರಾದ ಶ್ರೀ ಮಹಮ್ಮದ್ ಇಕ್ಬಾಲ್, ಶಾಲಾ ನಾಯಕ ಲಕ್ಷ್ಮೀನಾರಾಯಣ್, ಉಪ ನಾಯಕ ಐಸಾಕ್ ಮಥಾಯಸ್ ಅವರು ಉಪಸ್ಥಿತರಿದ್ದರು.ಸಮಾರೋಪ ಸಮಾರಂಭದ ಅತಿಥಿಯಾದ ವಂದನಿಯ ಫಾದರ್ ಜಾನ್ಸನ್ ಪಿಂಟೋ SJ ರವರು ಶಾಲಾ ಧ್ವಜವನ್ನು ಇಳಿಸಿ ಮುಖ್ಯೋಪಾಧ್ಯಾಯನಿಯವರಿಗೆ ಹಸ್ತಾಂತರಿಸಿದರು. ಇದರಿಂದ ಕ್ರೀಡಾಕೂಟವು ಅಧಿಕೃತವಾಗಿ ಮುಕ್ತಯಗೊಂಡುವುದನ್ನು ಸಂಕೇತಿಸಲಾಯಿತು.ದಿನಪೂರ್ತಿ ಉಜ್ವಲಿಸುತ್ತಿದ್ದ ಜ್ಯೋತಿಯನ್ನು ಶ್ರೀಯುತ ಪನ್ಮನಾಭ ರಾವ್ ನಂದಿಸುವುದರೊಂದಿಗೆ ಈ ಮಹತ್ವದ ಕಾರ್ಯಕ್ಕೆ ಮುಕ್ತಯ ದೊರೆಯಿತು. ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಯ್ಯ ರವರು ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ದೀಪ್ಸಿಕಾ ಡಿ’ಸೊಜಾ ಅವರು ನೆರೆದ ಎಲ್ಲರಿಗೂ ಕೃತಜ್ಯತೆಯನ್ನು ಸಲ್ಲಿಸಿದರು.ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.





























