ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯನ್ನು ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14,2025ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಶಿಕ್ಷಕರಿಂದ ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರಿಂದ ನೃತ್ಯ, ಹಾಡು, ಹಾಸ್ಯ ಭರಿತ ನಾಟಕ ಮತ್ತು ಮನೋರಂಜನ ಕಾರ್ಯಕ್ರಮಗಳು ನಡೆದವು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ನಾಯಕ ಲಕ್ಷ್ಮಿ ನಾರಾಯಣ ಹಾಗೂ ಉಪ ನಾಯಕ ಐಶನ್ ಮಥಾಯಿಸ್, ಶಾಲಾ ಮುಕ್ಯೋಪಾಧ್ಯಾಯಿನಿ ಶ್ರೀಮತಿ ಜೋಸಿಟ್ಟಾ ನೊರೋನ್ಹ ಹಾಗೂ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಮೊಹಮ್ಮದ್ ಇಕ್ಬಲ್ ರವರು ಉಪಸ್ಥಿತರಿದ್ದರು. ಶ್ರೀಮತಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರಶ್ಮಿ ನೆರೆದಿರುವ ಎಲ್ಲರಿಗೂ ಸ್ವಾಗತಿಸಿದರು. ಶಾಲಾ ಉಪ ನಾಯಕ ಐಸನ್ ಮಥಾಯಿಸ್ ನೆ ರೆದಿರುವ ಎಲ್ಲರಿಗೂ ಧನ್ಯವಾದ ಸಮರ್ಪಿಸಿದನು.ರುಚಿಯಾದ ಭೋಜನ ಮತ್ತು ತಂಪಾದ ಐಸ್ ಕ್ರೀಮ್ ಎಲ್ಲಾ ಮಕ್ಕಳಿಗೆ ವಿತರಿಸುದರೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.



























