hmaloysiusprimary@gmail.com +91-824-2449728

Welcoming New Correspondent – 2024

ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಚಾಲಕರಾದ ವಂ ಫಾ ಜಾನ್ ಡಿ’ಸೋಜಾ ಎಸ್‌ಜೆ ಅವರಿಗೆ ವಿದಾಯ ಮತ್ತು ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ ಜಾನ್ಸನ್ ಪಿಂಟೊರವರಿಗೆ ಸ್ವಾಗತ.

ಜುಲೈ 22, 2024 ರಂದು, ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಫಾ. ಜಾನ್ ಡಿಸೋಜ ಎಸ್.ಜೆ. ಇವರಿಗೆ ವಿದಾಯ ಸಮಾರಂಭ ಮತ್ತು ನಮ್ಮ ಹೊಸದಾಗಿ ನೇಮಕಗೊಂಡ ಸಂಚಾಲಕರಾದ ಫಾ. ಜಾನ್ಸನ್ ಪಿಂಟೋ ಎಸ್.ಜೆ ಇವರನ್ನು ಸ್ವಾಗತಿಸಲು ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೊಸಿಟಾ ನೊರೊನ್ನ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳ ಪರವಾಗಿ ಶಾಲೆಯ ಉಪನಾಯಕ ರಿಶೋನ್ ಡೆಸಾ ಫಾ ಜೋನ್ ಡಿಸೋಜ ರವರು ಶಾಲೆಗೆ ನೀಡಿದ ಕೊಡುಗೆಗಳಿಗಾಗಿ ಪುಷ್ಪಗುಚ್ಛ ನೀಡಿ ಮೆಚ್ಚುಗೆ ಸೂಚಿಸಿದನು. ಶಾಲೆಯ ಪರವಾಗಿ ಶಾಲಾ ಕಾರ್ಯದರ್ಶಿಯಾದ ಮಯೋಲ ಪಿಂಟೋ ಫಾ ಜಾನ್ಸನ್ ಪಿಂಟೊ ರವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ 5ನೇ ತರಗತಿಯ ಸ್ನಿತಿಕ್ ಎನ್. ಅವನಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕ, 400 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕ, 100 ಮೀಟರ್ ಬಟರ್ಫ್ಲೈನಲ್ಲಿ ಕಂಚಿನ ಪದಕ, 4×50 ಮೀಟರ್ಸ್ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×50 ಮೀಟರ್ಸ್ ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ಪೆಲ್ ಬೀ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಲಾಯಿತು. 2ನೇ ತರಗತಿಯ ಜೋರ್ಡಾನ್ ಫೆಸ್ಟನ್ , 3ನೇ ತರಗತಿಯ ಶ್ಲೋಕ್ ಶೆಟ್ಟಿಗಾರ್ , 3ನೇ ತರಗತಿಯ ಆಶರ್ ಕ್ರಾಸ್ತಾ, 7 ನೇ ತರಗತಿಯ ಪ್ರಿನ್ಸ್‌ಟನ್ , 6ನೇ ತರಗತಿಯ ಅನೀಶಾ – 6ನೇ ತರಗತಿಯ ಅನ್ವೇ ರಾಮಪ್ರಸಾದ್ ಇವರಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸ್ಪೆಲ್ ಬೀ ಮತ್ತು ಕೈಬರಹ ಸ್ಪರ್ಧೆಗಳಲ್ಲಿ ಭಾಗವಹಿಸಿದ ಇತರ ವಿದ್ಯಾರ್ಥಿಗಳಿಗೆ ಕೂಡ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ದಲ್ಲಿ ಮಾತನಾಡಿದ ಫಾ ಜೋನ್ ಡಿಸೋಜ ರವರು ಶಾಲೆಯಲ್ಲಿ ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಗಳಿಗಾಗಿ ಸಂತೋಷ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ದೃಢಸಂಕಲ್ಪದಿಂದ ಮುಂದುವರಿಸಲು ಪ್ರೋತ್ಸಾಹಿಸಿ ತಮ್ಮ ಮಾತನ್ನು ಕೊನೆಗೊಳಿಸಿದರು. ನಂತರ ಫಾ ಜಾನ್ಸನ್ ಪಿಂಟೊರವರು ಮಾತನಾಡಿ ಫಾ ಜೋನ್ ಡಿಸೋಜ ರವರು ಶಾಲೆಗೆ ನೀಡಿದ ಕೊಡುಗೆಯನ್ನು ಶ್ಲಾಘಸಿ ಧನ್ಯವಾದ ಅರ್ಪಿಸಿದರು. ಮತ್ತು ಒಂದು ಸ್ಪೂರ್ತಿದಾಯಕ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಉದಾರವಾಗಿ ಜ್ಞಾನವನ್ನು ನೀಡಲು ಶಿಕ್ಷಕರಿಗೆ ದೊಡ್ಡ ಹೃದಯ ಮತ್ತು ತೆರೆದ ಕೈಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಫಾ ಜೋನ್ ಡಿಸೋಜ ಅವರನ್ನು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಶಾಲಾಗೀತೆಯೊಂದಿಗೆ ಕಾರ್ಯಕ್ರಮ ವು ಕೊನೆಗೊಂಡಿತು.

Leave a Reply

Powered By PERWEB SOLUTIONS